ವಸತಿ ರಹಿತರಿಗೆ 120 ರಾತ್ರಿ ಶೆಲ್ಟರ್‌ ಆರಂಭಿಸುವಂತೆ ಸರಕಾರಕ್ಕೆ ಹೈಕೋರ್ಟ್‌ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ನಗರ ಪ್ರದೇಶಗಳಲ್ಲಿನ ರಹಿತರಿಗೆ ತಾತ್ಕಾಲಿಕ ವಸತಿ ಕಲ್ಪಿಸಲು ಮೂರು ತಿಂಗಳಲ್ಲಿ 120 ರಾತ್ರಿ ತಂಗುದಾಣಗಳಿಗೆ ಅನುಮೋದನೆ ನೀಡಿ, ಅವುಗಳು ಕಾರ್ಯಾರಂಭ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್‌ ಗುರುವಾರ ಸರಕಾರಕ್ಕೆ ಆದೇಶಿಸಿದೆ. ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್‌ ಅಡಿಯಲ್ಲಿ ನಗರದ ವಸತಿ ರಹಿತರಿಗೆ ಸೂರು ಕಲ್ಪಿಸುವಂತೆ ಕೋರಿ ಪಿಯುಸಿಎಲ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಆ ವೇಳೆ ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್‌ ಯೋಜನಾಧಿಕಾರಿ ಸಲ್ಲಿಸಿದ್ದ ಪ್ರಮಾಣಪತ್ರವನ್ನು ನ್ಯಾಯಾಲಯ ಪರಿಶೀಲಿಸಿತು. ಬಳಿಕ ನ್ಯಾಯಪೀಠ "ಸರಕಾರ 2021ರ ಫೆಬ್ರವರಿಯಲ್ಲಿ ನಡೆಸಿರುವ ಸಮೀಕ್ಷೆಯಂತೆ ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ನಗರಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ವಸತಿ ರಹಿತರಿಗೆ 166 ರಾತ್ರಿ ತಂಗುದಾಣಗಳ ಅಗತ್ಯವಿದೆ. ಆದರೆ ಸರಕಾರ ಈವರೆಗೆ 54ಕ್ಕೆ ಅನುಮೋದನೆ ನೀಡಿತು. ಆ ಪೈಕಿ 46 ಮಾತ್ರ ಕಾರ್ಯ ನಿರ್ವಹಿಸುತ್ತಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿ," ಎಂದು ಹೇಳಿತು. ಅಲ್ಲದೆ ಸರಕಾರ 120 ನೈಟ್‌ ಶೆಲ್ಟರ್ಸ್‌ ನಿರ್ಮಾಣಕ್ಕೆ ಕೂಡಲೇ ಅನುಮೋದನೆ ನೀಡಬೇಕು ಮತ್ತು ಅವುಗಳನ್ನು ಬಿಬಿಎಂಪಿ, ಹುಬ್ಬಳ್ಳಿ-ಧಾರವಾಡ ಮತ್ತು ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆರಂಭಿಸಬೇಕು ಎಂದು ಆದೇಶಿಸಿತು. ''ಬೆಂಗಳೂರು ನಗರಕ್ಕೆ 84 ನೈಟ್‌ ಶೆಲ್ಟರ್ಸ್‌ ಅಗತ್ಯವಿದೆ. ಆದರೆ 10 ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಹಾಗೆಯೇ ಹುಬ್ಬಳ್ಳಿ-ಧಾರವಾಡ ಮತ್ತು ಮೈಸೂರು ಮಹಾನಗರಕ್ಕೆ ತಲಾ 9 ಅಗತ್ಯವಿದ್ದು, ಸದ್ಯ ಒಂದೊಂದು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಆದ್ದರಿಂದ ಸರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂರು ತಿಂಗಳಲ್ಲಿ 42 ನೈಟ್‌ ಶೆಲ್ಟರ್ಸ್‌ ತೆರೆಯಬೇಕು ಮತ್ತು ಇನ್ನುಳಿದ 42 ಅನ್ನು ಆರು ತಿಂಗಳಲ್ಲಿ ಆರಂಭಿಸಬೇಕು ಎಂದು ಆದೇಶಿಸಿತು. ಉಳಿದ ನಗರ ಪ್ರದೇಶಗಳಲ್ಲಿ ಮೂರು ತಿಂಗಳಲ್ಲಿ ನೈಟ್‌ ಶೆಲ್ಟರ್ಸ್‌ ಆರಂಭಿಸಲು ಕ್ರಮ ಕೈಗೊಳ್ಳಬೇಕು'' ಎಂದು ನ್ಯಾಯಾಲಯ ಆದೇಶಿಸಿತು.


from India & World News in Kannada | VK Polls https://ift.tt/3eJp7UW

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...